
ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
’ಪ್ರೀತಿ ಅಂತೆ ಪ್ರೇಮ ಅಂತೆ, ಛೆ!’ ಅನ್ಕೊಂಡು ಒಳಗೆ ಬಂದವನಿಗೆ ’ಮತ್ತೆ’ ಒಂದು ಚೂರು ’ಪ್ರೀತಿ ಪ್ರೇಮ ಪ್ರಣಯ’ ದ ವಿಷಯಗಳ ಬಗ್ಗೆ ಯೊಚಿಸಿ ಅದೇ ಗುಂಗಿನಲ್ಲಿ ರೋಮಾಂಚನಗೊಳ್ಳುವಂತೆ ಮಾಡಿ, ಭೂತದ ದೃಶ್ಯಗಳು ಮನಸ್ಸಿನಲ್ಲಿ ಭೂತದ ತರ haunt ಮಾಡಿ, ಕುಣಿದಾಡಿ, ಚುಚ್ಚಿ ಎನೋ ಒಂಥರ pain ಅನುಭವಿಸುವಂತೆ ಮಾಡಿ ಕಡೆಗೆ ಎದ್ದು ಬರುವಾಗ ಪುನಃ ’ಪ್ರೀತಿ ಅಂತೆ ಪ್ರೇಮ ಅಂತೆ, ಹ್‍ಮ್‍ಮ್!’ ಎಂದು ವಾಸ್ತವತೆ ಅರಿತುಕೊಳ್ಳುವಂತೆ ಮಾಡಿದ ’ಹನಿ ಹನಿ ಪ್ರೇಮ್‍ಕಹಾನಿ’ - ಮುಂಗಾರು ಮಳೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ!!
ಯಾಕೋ ಇಂಗ್ಲಿಷ್ನ್‍ನಲ್ಲಿ ಈ ಚಿತ್ರದ ಅಭಿಪ್ರಾಯ ಬರೀಬೇಕು ಅನ್ನಿಸಲಿಲ್ಲ, ಮತ್ತು ಕನ್ನಡದಲ್ಲಿ ಒಂದೂ ವಿಮರ್ಶೆಯನ್ನೂ ಬರೆದಿಲ್ಲ ಅದಿಕ್ಕೆ ಈ ಪ್ರಯತ್ನ.
’ನಮಸ್ಕಾರ ನಮಸ್ಕಾರ ನಮಸ್ಕಾರ’ ಅಂತ ಪ್ರತಿ ದಿನ COMEDY ಮಾಡುವವ ಅನ್ನೋ image ಇದ್ದ ಗಣೇಶ್, ಮುಂಗಾರು ಮಳೆ ಚಿತ್ರದಿಂದ ಸಾಧಿಸಿರುವುದು ಅಸಾಧ್ಯವಾದದ್ದೇನಲ್ಲ ಆದರೂ ತುಂಬ ಹೊಗಳಬೇಕಾದ ವಿಶಯ ಏನೆಂದರೆ ಅತಿ natural ಆಗಿ, ಅನುಕರಣೆ ಇಲ್ಲದೆ straight from the heart ಅನ್ನುವಂತೆ ಅವರ ಪಾತ್ರ ಮೂಡಿ ಬಂದಿದೆ. ಅನುಮಾನ ಇಟ್ಕೊಂಡು ಚಿತ್ರ ನೋಡಕ್ಕೆ ಹೋದವರ ತಲೆ ಮೇಲೆ ಹೊಡೆದ ಹಾಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. A case of total perception change. ಆದರೆ ಈ ಚಿತ್ರದಲ್ಲೇನೊ ಅವರಿಗೆ ಪಾತ್ರ ತುಂಬ ಒಪ್ಪತ್ತೆ; ಮುಂದೆ ಬೇರೆ ಬೇರೆ ಪಾತ್ರಗಳನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದು ಕಾದು ನೋಡಬೇಕು.
ಚಿತ್ರ ಬಿಡುಗಡೆ ಆದ ಹೊಸದರಲ್ಲಿ ಗಣೇಶ್‍ನ ಮಿತ್ರರು ಸೇರಿ ಅವರಿಗೆ ಒಂದು ಪತ್ರ ಬರೆದು ಅದನ್ನು ವಿಜಯ ಕರ್ನಾಟಕದಲ್ಲಿ printಮಾಡಿಸಿದ್ದರು. ’ಗಣೇಶ ನೀನು ನಮ್ಮೆಲ್ಲರ ಕಥೆಯನ್ನೇ ಬೆಳ್ಳಿ ಪರದೆಯ ಮೇಲೆ ತಂದಿದ್ದೀಯ. ನಮ್ಮ ಕಥೆ ಹೇಳಿ ನಮ್ಮನ್ನು ನಗಿಸಿದ್ದೀಯ, ಅಳಿಸಿದ್ದೀಯ, ಮೆಚ್ಚುಗೆಯಲ್ಲಿ ಚಪ್ಪಾಳೆ ಹೊಡೆಯುವಂತೆ ಮಾಡಿದ್ದೀಯ’ ಅಂತೆಲ್ಲ ಬರೆದ್ದಿದ್ದರು. ಅದನ್ನು ಓದಿ, ನಾನು ’ಓಹ್! ಈ ರೀತಿ ಇರೊ ಚಿತ್ರ ಐ.ಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿರೊ ನನಗೆ ’ಅನ್ವಯಿಸೋದೇ’ ಇಲ್ಲ, ಇಷ್ಟ ಆಗೊಲ್ಲ’ ಇತ್ಯಾದಿ ಇತ್ಯಾದಿ ಅನ್ಕೊಂಡೆ.
ಹಾಗೇನಿಲ್ಲ...ಚಿತ್ರ ನೋಡಿದ ಮೇಲೆ ’ಅರೇ! ಇದು ನನ್ನ ಕಥೆ!!’ ಅಂತೇನು ಅನ್ನಿಸದಿದ್ದರೂ, I could relate to it well.
ಅವನಿಗೆ ಗೊತ್ತು ಅವಳನ್ನು ತಾನು ಪ್ರೀತಿಸ್ತಾನೆ ಅಂತ...ಆದರೆ ಇಲ್ಲಿವರೆಗೂ ಆ ಪ್ರೀತಿ ಸುರುಳಿ ಸುತ್ತಿ ಬಂದು ಅವನ ಕುತ್ತಿಗೆಗೆ ಸುತ್ತಿ, ನಗಬೇಕೋ ಅಳಬೇಕೋ ಗೊತ್ತಾಗದ ಹಾಗೆ ಮಾಡುತ್ತೆ ಅಂತ ಅವನು ತಿಳಿದಿರಲಿಲ್ಲ. ತಾನು ’ಸೋತ’ ಅನ್ನುವ ಭಾವನೆ ಬಂದಿದೆ. ಈಗ ಪ್ರೆಮದ ನಶೆ ಜೊತೆ ಮಳೆಯ ರಭಸ ಸೇರಿ ಅವನಿಗೆ ಅರಿವಾಗ್ತಿದೆ, ಆ ಪ್ರೇಮ ಅವನಿಗೆ ದಕ್ಕದೆ ಇರಬಹುದು ಅಂತ. ಇದೇ ಮಳೆಯಲ್ಲಿ ಒಮ್ಮೆ ಹುಚ್ಚನ ಹಾಗೆ ಖುಶಿಯಲ್ಲಿ ಕುಣಿದಿದ್ದ, ಈಗ ಅವನ ಮೇಲೆ ಅವನಿಗೆ ಪರಿವೆಯಿಲ್ಲ, ಜಗತ್ತಿದ್ದರೇನು ಬಿಟ್ಟರೇನು ಅನ್ನೋ ಸ್ತಿಥಿ. ಕಣ್ಣೀರು; ಆದರೆ ಮಳೆ ಇರೋದ್ರಿಂದ ಯಾರಿಗೂ ಅವನ ಕಣ್ಣೀರು ಗೊತ್ತಾಗ್ತಿಲ್ಲ.
ದೃಶ್ಯ ನೋಡಿ ಮನಸ್ಸಿಗೆ ಬೇಜಾರಾಯ್ತು. ಯಾಕೆ ಪ್ರೀತಿಸಿ ಈ ಥರ ಹುಚ್ಚರ ಹಾಗೆ ಆಡ್ತೀವಿ ಅನ್ನಿಸಿತು.
ಹೀಗೇ, ಅಂದು ನಾನು ಮಳೆಯಲ್ಲಿ ’ಮೈ’ಮರೆತು ಸುರಿಸಿದ ಕಣ್ಣೀರಿನ ನೆನಪಾಗಿ, ಇಂದು ಚಿತ್ರ ನೋಡುತ್ತ ಕಣ್ಣು ಮಂಜಾಯಿತು. (ಸಿಟಿಯ ’ಎಲ್ಲರೂ ಇದ್ದರೂ ಒಬ್ಬಂಟಿ’ ಅನ್ನೋ ಥರ ಜೀವನದಲ್ಲಿ ಕಣ್ಣೀರು ಯಾರಿಗೆ ಗೋಚರಿಸುತ್ತೆ?) ಇದು interval ಹೊತ್ತಿಗೆ....ಬಾಕಿ ಚಿತ್ರ ನೋಡುತ್ತ ಆ ಕಹಿ ಮರೆತು, ಮುಂದೆ ಜೀವನದಲ್ಲಿ ಬರಲಿರುವ ಸಿಹಿ ಸಿಹಿ ಘಟನೆಗಳನ್ನು ಅಪೇಕ್ಷಿಸುತ್ತ Enjoy ಮಾಡಿದೆ.
Overall ಚಿತ್ರ ತುಂಬ ಅರ್ಥಪೂರ್ಣವಾಗಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರ ಮುಂಚಿನ ಚಿತ್ರಗಳು ನಾನು ನೋಡಿಲ್ಲ, ಆದರೆ ಈ ಚಿತ್ರದಿಂದ ಅವರು ಪ್ರತಿಭಾವಂತ ಮತ್ತು clever ನಿರ್ದೇಶಕ ಅನ್ನೋದು ಗೊತ್ತಾಗುತ್ತೆ. ಮುಂಗಾರು ಮಳೆ mass public ಗೆ ಖಂಡಿತ ಇಷ್ಟ ಆಗತ್ತೆ ಆದರೂ, ತುಂಬ ಯೋಚನೆ ಮಾಡಿ ಸದಭಿರುಚಿಯಿಂದ ಮಾಡಿರುವ ಪ್ರಭಾವಶಾಲಿ class ಚಿತ್ರ ಕೂಡ.
ಈ ಚಿತ್ರದ strong point, ಇದರ ಸಂಗೀತ, ಸಾಹಿತ್ಯ. ಮನೋ ಮೂರ್ತಿ sudden ಆಗಿ ಕನ್ನಡ ಚಿತ್ರ ರಂಗದಲ್ಲಿ ಮಿಂಚಿರುವ ಸಂಗೀತ ನಿರ್ದೇಶಕ. Poetry ಅಂದರೆ ದೂರ ಓಡಿ ಹೋಗದೇ ಇದ್ದರೂ, ಅಷ್ಟೇನು ಗಮನ ಕೊಡದಿರುವ ನನ್ನಂಥವರೂ ಮತ್ತೆ ಮತ್ತೆ ಮೆಲಕು ಹಾಕಿ ಹಾಡ್ತಾನೇ ಇರೋಣ ಅನ್ನಿಸುವಂತಹ ಗೀತ ಸಾಹಿತ್ಯ (ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರಿಂದ)...ಈ ಚಿತ್ರದ ಹಾಡುಗಳು ನಿಜವಾಗಿಯೂ ’ವಿಸ್ಮಯಾ’!!!
ತುಟಿಗಳ ಹೂವಲಿ..ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ..ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ..ಹೃದಯದಿ ನಾನೆ ಕೊರೆದಿರುವೆ
ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ..ಹಾಗೆ ಸುಮ್ಮನೆ
ಅನಿಸುತಿದೆ ಯಾಕೊ ಇಂದು..ನೀನೇನೆ ನನ್ನವಳೆಂದು
ಮಾಯದ ಲೋಕದಿಂದ.. ನನಗಾಗೆ ಬಂದವಳೆಂದು
ಇನ್ನೊಂದು ಅಂಶ ಏನಂದ್ರೆ ಬಹುಶಃ ಜೋಗ್ ಜಲಪಾತ ಇಷ್ಟೊಂದು ಮನೋಹರವಾಗಿ (ಅಥವಾ ಇಷ್ಟೊಂದು ಭಯಂಕರವಾಗಿ?) ಯಾವುದೇ ಚಿತ್ರದಲ್ಲಿ ಸೆರೆ ಹಿಡಿಯಲ್ಪಟ್ಟಿಲ್ಲ!
ಮುಂಗಾರು ಮಳೆ ಅತ್ಯದ್ಭುತ ಸಿನೆಮಾ ಏನಲ್ಲ, ಆದರೆ ಎಲ್ಲರೂ ತಲೆ ದೂಗುವಂತಹ ಬುದ್ಧಿವಂತ ಪ್ರಯತ್ನ. ಎಲ್ಲರೂ ಈ ಚಿತ್ರದ ಯಾವುದೋ ಒಂದು ಭಾಗಕ್ಕೆ ರಿಲೇಟ್ ಮಾಡಿಕೊಳ್ಳಬಹುದು, ಅಂತ ನನ್ನ ಅನಿಸಿಕೆ. ಅದಕ್ಕೇ ಎಲ್ಲ್ರೂ ತಪ್ಪದೇ ಚಿತ್ರ ನೋಡಿ. ಕನ್ನಡ ಚಿತ್ರರಂಗ ಸಧ್ಯದಲ್ಲಿ ಇದ್ದ ಸ್ತಿಥಿ ಬರಗಾಲದ ಸ್ತಿಥಿ; ಒಳ್ಳೆಯ ಒಂದು ಚಿತ್ರ ಬರೋಕ್ಕೆ ಜನ ಕಾಯುತ್ತಾ ಇದ್ದರು. ಬಂತು, ಜನ ಮುತ್ತಿಗೆ ಹಾಕಿದ್ದಾರೆ. ಬಿಡುಗಡೆ ಆದ ಹಲವಾರು ವಾರಗಳಾದ್ರೂ ಕೂಡ ಪೀ.ವೀ.ಆರ್ ನಲ್ಲಿ ಎಲ್ಲಾ ಆಟಗಳು ತುಂಬಿ ನಡೀತಿವೆ. ಯೋಗರಾಜ್ ಭಟ್ ಅವರು ಕೊಟ್ಟ ಒಂದು ಸ್ವಾರಸ್ಯಕರ ಸಂದರ್ಶನವನ್ನು ಓದಿದ್ದೀರಾ? ಬೇಕಾದರೆ ನನ್ನನ್ನು ಸಂಪರ್ಕಿಸಿ, ಕಳಿಸ್ತೀನಿ. ಓದಿ ಮಜಾ ತೊಗೊಳ್ಳಿ; ಬಾಯಿ ತುಂಬ ಬಯ್ದಿದ್ದಾರೆ ಬೇರೆ ನಿರ್ದೇಶಕರನ್ನು ;-)